ಬೇಸಿಗೆಯಲ್ಲಿ ವಿಶೇಷ ಅನುಭೂತಿ ನೀಡುವ ಪ್ರವಾಸಿ ತಾಣಗಳಿವು

ಬೆಂಗಳೂರು: ಬೇಸಿಗೆಯ ಬೇಗೆಯಿಂದ ಹಲವು ದಿನಗಳ ಮಟ್ಟಿಗಾದರೂ ಪಾರಾಗಲು ಕೆಲವರು ಪ್ರವಾಸದ ಮೊರೆ ಹೋಗುತ್ತಾರೆ. ಅದರಲ್ಲೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಆರಾಮದಾಯಕ ಬೇಸಿಗೆಯನ್ನು ಕಳೆಯಲು ಹೆಚ್ಚಿನವರು ಇಚ್ಛಿಸುತ್ತಾರೆ. ನಮ್ಮ ದೇಶದಲ್ಲಿಯೇ ಇರುವ ಕೆಲವು ಪ್ರವಾಸಿ ತಾಣಗಳು ಬೇಸಿಗೆ ಪ್ರವಾಸಕ್ಕೆ ಅತ್ಯುತ್ತಮ ತಾಣಗಳಿವೆ.

ಸಮುದ್ರಮಟ್ಟಕ್ಕಿಂತ 1800 ಮೀ. ಎತ್ತರಕ್ಕಿರುವ ಕೇರಳದ ಕೂನೂರು ಬೇಸಿಗೆ ಪ್ರವಾಸಿಗರಿಗೆ ದಿ ಬೆಸ್ಟ್ ಸ್ಥಳ. ಸಾಹಸ ನಿಮಗೆ ಅಚ್ಚುಮೆಚ್ಚಾಗಿದ್ದಲ್ಲಿ ನಿಮಗೆ ಇದು ಪರ್ಫೆಕ್ಟ್ ಜಾಗ.

ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಸುಂದರ ಜಲಪಾತಗಳಿದ್ದು, ಬಿಸಿಲ ಬೇಗೆಯಿಂದ ಬಳಲಿದವರು ಕೂಲ್ ಆಗಲು ಅವಕಾಶವಿದೆ. ಬೇಸಿಗೆಯಲ್ಲಿ ಸುತ್ತಾಡಲು ಇದು ಒಳ್ಳೆಯ ಪ್ರವಾಸಿ ಸ್ಥಳ.

ಡಾಲ್ಹೌಸಿ ಅತ್ಯಂತ ಪ್ರಸಿದ್ಧವಾದ ಬೇಸಿಗೆಯ ತಾಣವಾಗಿದೆ ಇದನ್ನು ಏಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡುವ ಸ್ಥಳಗಳ ಪಟ್ಟಿ ಸೇರಿಸದಿದ್ದರೆ ಆ ಪಟ್ಟಿಯು ಅಪೂರ್ಣವೆನಿಸುವುದು. ಈ ಸ್ಥಳವು ಹಿಮದಿಂದ ಆವೃತವಾಗಿರುವ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದ್ದು ಭಾರತದ ಅತ್ಯಂತ ಚಳಿಯ ಪ್ರಮುಖ 10 ಸ್ಥಳಗಳಲ್ಲಿ ಒಂದಾಗಿದೆ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಭೇಟಿ ನೀಡಬಹುದಾದ ಸ್ಥಳವಾಗಿದೆ.

ಡಾಲ್ ಹೌಸಿಯ ಪ್ರವಾಸದ ಜೊತೆಗೆ ಧರಮ್ ಶಾಲಾದ ಪ್ರವಾಸವು ಜಂಟಿಯಾಗಿ ಮಾಡಬಹುದಾಗಿದ್ದು ಇದೂ ಕೂಡಾ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಭೇಟಿ ಕೊಡಬಹುದಾದಂತಹ ಪ್ರಮುಖ ಸ್ಥಳವಾಗಿದೆ. ಧರಮ್ ಶಾಲಾವು ಏಪ್ರೀಲ್ ತಿಂಗಳಲ್ಲಿ ದಿನವೆಲ್ಲಾ ಬೆಚ್ಚಗಿದ್ದು ರಾತ್ರೀ ಅಷ್ಟೇ ಚಳಿಯನ್ನು ಹೊಂದಿದೆ. ಇಲ್ಲಿ ಗರಿಷ್ಟ ಸರಾಸರಿ ಉಷ್ಣತೆಯು ಸುಮಾರು 24 ಡಿಗ್ರಿ ಸೆಂಟಿಗ್ರೇಡ್.

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಒಂದು ಅದ್ಬುತ ಗಿರಿಧಾಮವಾಗಿದ್ದು, ಇದು ಯಾವಾಗಲೂ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳೊಂದಿಗೆ ಸಡಗರದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಪ್ರಯಾಣಿಸಲು ಹವಾಮಾನವು ಹೆಚ್ಚು ಅನುಕೂಲಕರವಾಗಿರುವುದರಿಂದ ಶಿಮ್ಲಾ ಸಹ ಬೇಸಿಗೆಯ ತಾಣವಾಗಿದೆ.

ಗುಲ್ಮಾರ್ಗ್ ಬೇಸಿಗೆಯಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ಚಳಿಗಾಲದ ಕ್ರೀಡೆಗಳ ಕೇಂದ್ರವಾಗಿದೆ ಮತ್ತು ಬೇಸಿಗೆಯ ಬಿಸಿಲಿನಿಂದ ತಣ್ಣಗಾಗಲು ಸೂಕ್ತ ಸ್ಥಳವಾಗಿದೆ. ಗುಲ್ಮಾರ್ಗ್ ವರ್ಷಪೂರ್ತಿ ಭೇಟಿ ನೀಡುವ ತಾಣವಾಗಿದ್ದು, ಬೇಸಿಗೆ ಕಾಲದಲ್ಲಿ ಇಲ್ಲಿ ಹಲವು ಪ್ರವಾಸಿಗರು ಆಗಮಿಸುತ್ತಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!