ರಾಮನಗರ: ಕೊರೊನಾ ಮಹಾಮಾರಿ ಇಡೀ ರಾಜ್ಯವನ್ನೆ ಆವರಿಸಿದೆ, ಇಂತಹ ಸಮಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವ ಯೋಚನೆ ಯಾಕೆ ಬೇಕಿತ್ತು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಇದೇ ಜಿಂದಾಲ್ ಕಂಪನಿಗೆ ಭೂಮಿ ನೀಡಿದ್ರೆ ಪ್ರತಿಭಟನೆ ಮಾಡುತ್ತೇನೆ ಅಂತಾ ಹೇಳಿದ ನೀವು ಇವತ್ತು ಅದೇ ಕಂಪನಿಗೆ ಭೂಮಿ ನೀಡಿದ್ದೀರಿ ಯಾವ ನೈತಿಕತೆ ನಿಮಗೆ ಇದೆ. ಒಂದು ವೇಳೆ ಭೂಮಿ ನೀಡಿದ್ರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಸಚಿವ ಉಮೇಶ್ ಕತ್ತಿ ವಿರುದ್ಧ ಮಾತನಾಡಿದ ಅವರು, ಅವನೊಬ್ಬ ಹುಚ್ಚ ಈ ಹುಚ್ಚನನ್ನ ಮಂತ್ರಿ ಮಾಡಿದ್ದಾರೆ, ಕ್ಷಮಾಪಣೆ ಕೇಳಿದ ತಕ್ಷಣ ಅವನನ್ನ ಬಿಟ್ಟು ಬಿಡುವುದಲ್ಲ ರಾಜೀನಾಮೆ ಪಡೆದು ಸಂಪುಟದಿಂದ ವಜಾ ಮಾಡಬೇಕೇಂದು ಯಡಿಯೂರಪ್ಪ ಅವರನ್ನ ವಾಟಾಳ್ ನಾಗರಾಜ್ ಒತ್ತಾಯಿಸಿದರು.