ಸಿಡಿಲಿನ ಆರ್ಭಟಕ್ಕೆ ಬುಧವಾರ ಮೂವರು ಬಲಿಯಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದ್ದು, ಕಳೆದ ಎರಡು ದಿನಗಳಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ 7ಕ್ಕೇರಿಕೆಯಾಗಿದೆ.
ವಿಜಯಪುರ ನಗರದ ಹೊರವಲಯದ ಟಕ್ಕೆ ಬಳಿ ಇರುವ ಮಹಮ್ಮದ ಮಸಜೀದ್ ಹತ್ತಿರ ಘಟನೆ ಸಂಭವಿಸಿದ್ದು, ಅಶೋಕ ಕಾರಜೋಳ (48), ಬಾಷಾಸಾಬ್ ಕರ್ಜಗಿ (40) ಮತ್ತು ಜಾವೀದ್ ಜಾಲಗೇರಿ (33) ಮೃತ ದುರ್ದೈವಿಗಳು.
ಸಂಜೆ ಮಳೆ ಬರುವಾಗ ಮಸಜೀದ ಬಳಿ ಆಶ್ರಯ ಪಡೆದಿದ್ದ ಮೂವರು ಒಂದೇ ಕಡೆ ನಿಂತಿದ್ದಾಗ ಸಿಡಿಲು ಬಡಿದಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಸಿಡಿಲು ಬಡಿದಾಗ ಸಮೀಪದಲ್ಲಿದ್ದ ಮೂರು ಮೇಕೆಗಳು ಸಹ ಮೃತಪಟ್ಟಿದ್ದು, ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ ಈ ಘಟನೆ ನಡೆದಿದ್ದು, ಜನರು ಸಿಡಿಲಿನ ಆರ್ಭಟಕ್ಕೆ ಬೆಚ್ಚಿ ಬೀಳುವಂತಾಗಿದೆ.