ವಿಜಯೇಂದ್ರ ಗೆ ಸಿಗದ ಪರಿಷತ್ ಟಿಕೆಟ್ – ಮಾಜಿ ಸಿಎಂ ಬಿಎಸ್ ವೈ ಗೆ ಶಾಕ್

ವಿಧಾನ ಪರಿಷತ್ ಚುನಾವಣೆಗೆ ಕೊನೆಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿವೈ ವಿಜಯೇಂದ್ರ ರಿಗೆ ಟಿಕೆಟ್ ನೀಡಲು ಹೈ ಕಮಾಂಡ್ ನಿರಾಕರಿಸುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪಗೆ ಶಾಕ್ ನೀಡಿದೆ.

BY Vijayendra: Karnataka CM BS Yediyurappa's son BY Vijayendra breaks  lockdown rules to visit temple | Mysuru News - Times of India

ಕುಟುಂಬ ರಾಜರಾಕರಣಕ್ಕೆ ಹೈಕಮಾಂಡ್ ಮನ್ನಣೆ ನೀಡಿಲ್ಲ. ಲಿಂಗಾಯತ ಕೋಟಾದಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರಾಗಿರುವ ಧಾರವಾಡದ ಲಿಂಗರಾಜ್ ಪಾಟೀಲ್, ಮಹಿಳಾ ಹಾಗೂ ಒಕ್ಕಲಿಗ ಕೋಟಾದಲ್ಲಿ ಶಿವಮೊಗ್ಗ ಮೂಲದ ಸಿ. ಮಂಜುಳಾ, ದಲಿತ ಕೋಟಾದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹಾಗೂ ಒಬಿಸಿ ಕೋಟಾದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಕೇಶವ ಪ್ರಸಾದ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ :- ಅಲ್ಪಾವಧಿಯಲ್ಲೇ ಕ್ವಾಡ್ ಪ್ರಮುಖ ಸ್ಥಾನ ಗಳಿಸಿದ್ದು ಮಾತ್ರವಲ್ಲದೇ ಇಂಡೋ-ಪೆಸಿಫಿಕ್‌ ನಲ್ಲಿ ಶಾಂತಿಯನ್ನು ಖಾತ್ರಿಪಡಿಸಿದೆ – ಮೋದಿ 

Yediyurappa's son Vijayendra is super CM', claims letter by BJP MLAs to  high command | The News Minute

ವಿಧಾನ ಪರಿಷತ್ಗೆ ಪ್ರವೇಶ ಪಡೆದು ಸಚಿವ ಸಂಪುಟದಲ್ಲಿ ಅವಕಾಶ ಪಡೆಯುತ್ತಾರೆ ಎಂದೇ ಹೇಳಾಗುತ್ತಿದ್ದ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಹೈ ಕಮಾಂಡ್ ನಿರಾಸೆ ಮಾಡಿದೆ. ಈ ಮೂಲಕ ಕುಟುಂಬ ರಾಜಕಾರಣಕ್ಕೆ ಪಕ್ಷ ಮನ್ನಣೆ ಹಾಕುವುದಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.

ಇದನ್ನೂ ಓದಿ :- ಲಾರಿ-ಬಸ್ ನಡುವೆ ಭೀಕರ ಅಪಘಾತ- 8 ಮಂದಿ ಸಾವು 26 ಮಂದಿಗೆ ಗಾಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!