ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ವೈನ್ ಪೆಸ್ಟ್ ನಡೆಯುತ್ತಿದೆ. ರಾಜ್ ನ್ಯೂಸ್ ಕನ್ನಡ ಹಾಗೂ ರಾಜ್ ಮ್ಯೂಸಿಕ್ ಆಯೋಜಿಸಿರುವ ಪೆಸ್ಟ್ ನ್ನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿದ್ರು.
ಈ ವೇಳೆ ಮಾತನಾಡಿದ ಅವರು ದ್ರಾಕ್ಷಿ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವೈನ್ ಮೇಳ ಇಂದಿನ ಅಗತ್ಯ ಅಂತ ವಾಹಿನಿ ಕಾರ್ಯವನ್ನು ಕೊಂಡಾಡಿದ್ರು.
ಆ ಅಪರೂಪದ ವೈನ್ ಮೇಳದಲ್ಲಿ ಒಂದೇ ಸೂರಿನಡಿ ವೈವಿಧ್ಯಮಯ ರಾಷ್ಟ್ರೀಯ ಅಂತಾರಾಷ್ಟ್ರೀಯ ವೈನ್ ಗಳು ಲಭ್ಯವಿದೆ. ನಾಳೆ ಕೂಡ ವೈನ್ ಪ್ರಿಯರು ಇಲ್ಲಿಗೆ ಭೇಟಿ ನೀಡಬಹುದು. ವೈನ್ ಮಾತ್ರವಲ್ಲದೆ ವೈವಿಧ್ಯಮಯ ಆಹಾರಗಳು ಇಲ್ಲಿ ಲಭ್ಯವಿದೆ.
ಇದನ್ನೂ ಓದಿ : – ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದುಮಾಡಿ – ಸಿದ್ದರಾಮಯ್ಯ ಆಗ್ರಹ