ಬಾಡಿಗೆ ಮನೆ ಬಳಕೆದಾರರಿಗೂ 200 ಯೂನಿಟ್ ವಿದ್ಯುತ್ ಪ್ರೀ ಯೋಜನೆ ಅನ್ವಯ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. 200 ಯೂನಿಟ್ ಪ್ರೀ ವಿದ್ಯುತ್ ಬಾಡಿಗೆ ಮನೆದಾರರಿಗೆ ಅನ್ವಯ ಆಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ ಎಂಬ ವಿಚಾರ ಬಾಡಿಗೆ ಮನೆಯಲ್ಲಿ ವಾಸಿಸುವ ಜನರಿಗೆ ಆತಂಕ ಸೃಷ್ಟಿ ಮಾಡಿತ್ತು.ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಬಾಡಿಗಾದಾರರಿಗೂ ಈ ಪ್ರೀ ವಿದ್ಯುತ್ ಯೂನಿಟ್ ಕೊಡ್ತೀವಿ.ಯಾರ್ ಯಾರು ಬಡವರು 200 ಯುನಿಟ್ ಒಳಗೆ ಬಳಸಿದ್ದಾರೆ ಅವರಿಗೆಲ್ಲ ಉಚಿತ. 50-70-100 ಯೂನಿಟ್ ಎಷ್ಟಾದರೂ ಉಪಯೋಗಿಸಬಹುದು.

ಅವರು ಯಾರೂ ಕಟ್ಟೋ ಹಾಗಿಲ್ಲ.ಬಾಡಿಗೆದಾರರಿಗೂ ಕೂಡ ಇದು ಅನ್ವಯ ಆಗುತ್ತೆ ವಾಣಿಜ್ಯ ಉದ್ದೇಶದ ಬಳಕೆಗೆ ಆಗಲ್ಲ.ಬಾಡಿಗೆದಾರರನ್ನೂ ಸೇರಿಸಿಕೊಂಡು ಪ್ರಯೋಜನ ಆಗುತ್ತೆ ಎಂದು ಹೇಳಿದರು.ಇನ್ನೂ ಡಿಸಿಎಂ ಡಿಕೆಶಿವಕುಮಾರ್ ಮಾತನಾಡಿ ನಾವು ಗೊಂದಲ ನಿರ್ವಹಣೆ ಮಾಡುತ್ತೇವೆ.ನಾವು ಏನ್ ಮಾತು ಕೊಟ್ಟಿದ್ದೇವೋ ಅದನ್ನ ಮಾಡುತ್ತೇವೆ. ಅಧಿಕಾರಿಗಳು ಅವರ ಆ್ಯಂಗಲ್ ಇರುತ್ತೆ. ಅಧಿಕಾರಗಳ ಆ್ಯಂಗಲ್ ನಾನು ಪ್ರಶ್ನೆ ಮಾಡಲ್ಲ.ಯಾರಿಗೂ ಯಾವ ಆಕ್ರೋಶ, ಆತಂಕ ಬೇಡ.ಎಲ್ಲವನ್ನೂ ಕೂತು ನಾವು ಚರ್ಚೆ ಮಾಡುತ್ತೇವೆ.ನಾವು ಏನು ಮಾತು ಕೊಟ್ಟಿದ್ದೇವೋ ಅದರಂತೆ ಮಾಡುತ್ತೇವೆ ಎಂದು ಹೇಳಿದರು.