ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಭಾರಿ ಮಳೆ ಸುರಿದಿದೆ. ಸತತ ಮೂರ್ನಾಲ್ಕು ಗಂಟೆಗಳ ಕಾಲ ಎಡಬಿಡದೆ ಮಳೆ ಸುರಿದಿದೆ.
ರಾತ್ರಿಡಿ ಭಾರಿ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದ್ದಾರೆ. ಯಲಹಂಕದಲ್ಲಿ ಅತಿಹೆಚ್ಚು ಮಳೆ ದಾಖಲಾಗಿದೆ. ನಿನ್ನೆ ಯಲಹಂಕದಲ್ಲಿ 14-7 ಸೆಂ.ಮೀ ಮಳೆ ಸುರಿದಿದೆ.
ಎಲ್ಲೆಲ್ಲಿ ಎಷ್ಟು ಮಳೆ
ಯಲಹಂಕ -14.7ಸೆಂಮಿ
ಹಂಪಿನಗರ 9.4ಸೆಂಮಿ
ನಾಗಪುರ (ವೆಸ್ಟ್ ಜೋನ್ ) 8.95ಸೆಂಮಿ
ಜಕ್ಕೂರು- 8.65ಸೆಂಮಿ
ನಂದಿನಿ ಲೇಔಟ್ -8.55
ವಿಶ್ವನಾಥ್ ನಾಗೇನಹಳ್ಳಿ (ಈಸ್ಡ್ ಜೋನ್) -7.5ಸೆಂಮಿ
ರಾಜ್ ಮಹಲ್ ಗುಟ್ಟಳ್ಳಿ -7.6
ಗಾಳಿ ಆಂಜನೇಯ ಟೆಂಪಲ್ -7.5ಸೆಂಮಿ
ಕೊಟ್ಟಿಗೆಪಾಳ್ಯ -7ಸೆಂಮಿ
ಕಮ್ಮನಹಳ್ಳಿ (ಈಸ್ಟ್ ಜೋನ್)-6.95
ಮಾರುತಿ ಮಂದಿರ ವಾರ್ಡ್ -6.8ಸೆಂಮಿ
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ -6.75ಸೆಂಮಿ
ಅಗ್ರಹಾರ ದಾಸರಹಳ್ಳಿ -6.7
ಬೈಯಪ್ಪನಹಳ್ಳಿ ಭಾಗದಲ್ಲಿ ರಸ್ತೆಯಲ್ಲಿ ಈಗಲೂ ಮಳೆ ನೀರು ನಿಂತಿದೆ. ಮಳೆ ನೀರಿನಲ್ಲಿ ಓಡಾಡ್ತಿರೋ ಬೈಕ್ ಗಳು.ಮಳೆ ನೀರಿನಲ್ಲಿ ಸಿಲುಕಿ ವಾಹನ ಸವಾರರ ಪರದಾಡಿದ್ದಾರೆ. ಬೆಂಗಳೂರಿನಲ್ಲಿ ಮಳೆ ಹಿನ್ನೆಲೆಯಲ್ಲಿ ಅಂಡರ್ ಪಾಸ್ ಗಳನ್ನ ಕ್ಲೋಸ್ ಪೊಲೀಸರು ಮಾಡಿದ್ದಾರೆ. ನಗರದ ಬಹುತೇಕ ಅಂಡರ್ ಪಾಸ್ ಗಳು ಕ್ಲೋಸ್ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಕೆ ಆರ್ ಸರ್ಕಲ್ ಅಂಡರ್ ಪಾಸ್ ಬಳಿ ದುರ್ಘಟನೆ ನಡೆದಿತ್ತು.ಅಂಡರ್ ಪಾಸ್ ನಲ್ಲಿ ನುಗ್ಗಿದ್ದ ನೀರಿನಲ್ಲಿ ಸಿಲುಕಿ ಓರ್ವ ಯುವತಿ ಸಾವನ್ನಪ್ಪಿದ್ಳು. ಘಟನೆ ನಂತರ ಮಳೆ ಬಂದ ಕೂಡಲೇ ಅಂಡರ್ ಪಾಸ್ ಗಳನ್ನ ಕ್ಲೋಸ್ ಪೊಲೀಸರು ಮಾಡಿದ್ದಾರೆ. ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೂಲ್ ಸೆಂಟರ್ ಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಮೊಬೈಲ್ ಮುಖಾಂತರ ಅಧಿಕಾರಿಗಳು ವಿಷಲ್ಸ್ ತೋರಿಸುತ್ತಿದ್ದಾರೆ.