Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಮದ್ವೆಯಾಗಿದ್ದರೂ ಪ್ರಿಯಕರನ ಜತೆ ಲಿವ್​ ಇನ್ ರಿಲೇಷನ್ ಶಿಪ್: ಮುಂದೇನಾಯ್ತು ಗೊತ್ತಾ?

ಬೆಂಗಳೂರು: ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ ಮತ್ತು ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ದೊಡ್ಡ ಗುಬ್ಬಿ ನಿವಾಸದ ‌ಡಿ ಮ್ಯಾಕ್ಸ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಸೌಮಿನಿ ದಾಸ್ ಮತ್ತು ಅಭಿಲ್ ಅಬ್ರಾಹಂ ಮೃತ ದುರ್ದೈವಿಗಳು.

ಸೌಮಿನಿ ದಾಸ್ ಬಂಗಾಳ ಮೂಲದವಳುವಾಗಿದ್ದು, ಕೇರಳ ಮೂಲದ ಅಭಿಲ್ ಅಬ್ರಾಹಂ ಎಂದು ತಿಳಿದುಬಂದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೌಮಿನಿ ದಾಸ್‌ ಗೆ ಈ ಮೊದಲೆ ವಿವಾಹವಾಗಿತ್ತು. ಆಕೆ ಬೆಂಗಳೂರಿನಲ್ಲಿ ಎರಡನೇ ವರ್ಷದ ನರ್ಸಿಂಗ್‌ ಮಾಡುತ್ತಿದ್ದಳು. ಅಬ್ರಾಹಂ ನರ್ಸಿಂಗ್ ಸರ್ವಿಸ್ ಏಜೆನ್ಸಿ ನಡೆಸುತ್ತಿದ್ದನು.ಕಳೆದ ಎರಡು‌ ವರ್ಷಗಳ ಹಿಂದೆಯೇ ಈಕೆಗೆ ಮದುವೆಯಾಗಿತ್ತು.ಬೆಂಗಳೂರಿನಲ್ಲಿ ಇಬ್ಬರಿಗು ಪರಿಚಯವಾಗಿ ಪ್ರೇಮವಾಗಿತ್ತು. ಆಕೆ ರಜೆ ಇದ್ದಂತಹ ಸಂದರ್ಭದಲ್ಲಿ ಹಾಗೂ ಬಿಡುವಿನಲ್ಲಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು.

ಕೆಲ ದಿನಗಳ ಹಿಂದೆ ಕೊಲ್ಕತ್ತಾಗೆ ಹೋಗಿದ್ದ ಸೌಮಿನಿ. ಇದಾದ ಬಳಿಕ ಬೆಂಗಳೂರಿಗೆ ಬಂದಿದ್ದಳು.14 ದಿನಕ್ಕೆ ಫ್ಲ್ಯಾಟ್‌ ಬಾಡಿಗೆ ಪಡೆದಿದ್ದ ಇಬ್ಬರು ಲಿವಿಂಗ್ ಟುಗೆದರ್​ನಲ್ಲಿದ್ದರು. ನಂತರ ಸೌಮಿನಿ ತನ್ನ ಪತಿ ಪ್ರೇಮದ ವಿಚಾರ ತಿಳಿಸಿದಳು.ಆನಂತರ ಗಲಾಟೆಯಾಗಿದೆ ಎನ್ನಲಾಗಿದೆ.ಈ ವಿಚಾರಕ್ಕೆ ಇಬ್ಬರು ಸಾಯಲು ತೀರ್ಮಾನ ಮಾಡಿದ್ರು.ಭಾನುವಾರ ಮಧ್ಯಾಹ್ನ ವೇಳೆಗೆ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!