ದುಬೈ: ಬಿಗ್ ಬಾಸ್ ಖ್ಯಾತಿಯ ನಟಿ ಸನಾ ಖಾನ್ ಬುರ್ಜ್ ಖಲೀಫಾದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಗೋಲ್ಡ್ ಪ್ಲೇಟೆಡ್ ಕಾಫಿ ಹೀರಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸನಾ ಖಾನ್ ತಮ್ಮ ಪತಿಯೊಂದಿಗೆ ದುಬೈ ಪ್ರವಾಸಕ್ಕೆ ತರಳಿದಾಗ ಈ ಫೊಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಬುರ್ಜ್ ಖಲೀಫಾದ 122ನೇ ಮಹಡಿಯಲ್ಲಿರುವ ಅಟಮಾಸ್ಫಿಯರ್ ಎಂಬ ರೆಸ್ಟೊರೆಂಟ್ನಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಾರೆ. ತಮಗೆ ಸರ್ಪ್ರೈಸ್ ಆಗಿ ಪತಿ ಅಲ್ಲಿಗೆ ಕರೆದುಕೊಂಡು ಹೋದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸನಾ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಮೊಟ್ಟೆಯಿಂದ ತಯಾರಿಸಿದ ಸನ್ನಿ ಸೈಡ್ ಅಪ್ ಮತ್ತು ಅರಗುಲಾ ಸೊಪ್ಪಿನ ಸಲಾಡ್ ಜೊತೆಗೆ ಚಿನ್ನದ ಪ್ಲೇಟೆಡ್ ಕಾಫಿಯನ್ನು ಸನಾ ದಂಪತಿಗಳು ಸವಿದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೂಲ್ ಚಿತ್ರದಲ್ಲಿ ಸನಾ ಖಾನ್ ನಾಯಕಿಯಾಗಿ ಅಭಿನಯಿಸಿದ್ದರು.
ಹಿಂದಿ ಬಿಗ್ ಬಾಸ್ ಸೀಸನ್ 3ರಲ್ಲಿ ಸನಾ ಭಾಗವಹಿಸಿದ್ದರು.
ಕಳೆದ ವರ್ಷ ನವೆಂಬರ್ 20ರಂದು ಸನಾ ಖಾನ್ ಅವರು ಅನಾಸ್ ಕೈಹಿಡಿದಿದ್ದರು. ಧರ್ಮದ ಕಾರಣಕ್ಕಾಗಿ ಸನಾ ಖಾನ್ ಅವರು ನಟನೆಗೆ ಗುಡ್‌ಬೈ ಹೇಳಿದ್ದರು.