ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ವಿಚ್ಛೇದನದ ಹಾದಿ ಹಿಡಿದಿದೆ ಎಂಬ ವದಂತಿ ಹರಡಿದೆ.
ಪ್ರಿಯಾಂಕ ಮತ್ತು ನಿಕ್ ಜೋನ್ಸ್ ಬೇರ್ಪಟ್ಟ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದು ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದಿದೆ. ಇದಕ್ಕೆ ಕಾರಣ ಪ್ರಿಯಾಂಕ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರಿನ ಮುಂದೆ ಇದ್ದ ನಿಕ್ ಜೋನ್ಸ್ ಸರ್ ನೇಮ್ ತೆಗೆದುಹಾಕಿದ್ದು.
ಇನ್ ಸ್ಟಾಗ್ರಾಂನಲ್ಲಿ ನಿಕ್ ಜೋನ್ಸ್ ಹೆಸರು ತೆಗೆದ ಪ್ರಿಯಾಂಕ ತನ್ನ ಮೊದಲಿನ ಚೋಪ್ರಾ ಸರ್ ನೇಮ್ ಮತ್ತೆ ಹಾಕಿಕೊಂಡಿದ್ದರು.
ಆದರೆ ಸೋಮವಾರ ನಿಕ್ ಜೋನ್ಸ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಪೋಸ್ಟ್ ಮಾಡಿದ್ದು, ಮಂಡೇ ಮೋಟಿವೇಷನ್, ಲೆಟ್ಸ್ ಡು ಇಟ್ ಎಂದು ಶೀರ್ಷಿಕೆ ಹಾಕಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ, ನಿನ್ನ ತೋಳಿನಲ್ಲಿ ಸಾಯುವ ಆಸೆ ಎಂದು ಹೇಳಿದ್ದಾರೆ. ಅಲ್ಲದೇ ಲವ್ ಸಿಂಬರ್ ಇರುವ ಇಮೋಜಿ ಹಾಕಿದ್ದಾರೆ.
ಈ ಮೂಲಕ ಇಬ್ಬರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಹೇಳಲಾಗಿದ್ದು, ಮುಂದೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.