ಭಾರತ ಕ್ರಿಕೆಟ್ ತಂಡದ ಮಾಂಸಾಹಾರ ನಿಯಮದಲ್ಲಿ ಬದಲಾವಣೆ: ಬೀಫ್, ಪೋರ್ಕ್ ನಿಷೇಧ!

ಭಾರತ ಕ್ರಿಕೆಟ್ ತಂಡಕ್ಕೆ ನೀಡಲಾಗುತ್ತಿದ್ದ ಮಾಂಸಹಾರದಲ್ಲಿ ಬಿಸಿಸಿಐ ಮಹತ್ವದ ಬದಲಾವಣೆ ಮಾಡಿದ್ದು, ಬೀಫ್ ಮತ್ತು ಪೋರ್ಕ್ ನಿಷೇಧಿಸಿದೆ.

ಪಂದ್ಯ ಮತ್ತು ಅಭ್ಯಾಸದ ವೇಳೆ ಆಟಗಾರರಿಗೆ ನೀಡಲಾಗುವ ಭೋಜನ ವ್ಯವಸ್ಥೆ ವೇಳೆ ಹಲಾಲ್ ಮಾಡಿದ ಮಾಂಸಹಾರವನ್ನೇ ನೀಡಬೇಕು. ಅಲ್ಲದೇ ಪೋರ್ಕ್ ಮತ್ತು ಬೀಫ್ ನೀಡುವಂತಿಲ್ಲ ಎಂದು ತಿಳಿಸಿದೆ.

ಕಾನ್ಪುರದಲ್ಲಿ ನವೆಂಬರ್ 25ರಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯ ಆಡಲಿದ್ದು, ಪಂದ್ಯ ಆರಂಭಕ್ಕೆ ಕೆಲವೇ ದಿನಗಳು ಇರುವಾಗ ಬಿಸಿಸಿಐ ಈ ನಿರ್ಧಾರ ಕೈಗೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಭಾರತ ತಂಡದ ಆಟಗಾರರ ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಲು ಮುಂದಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!