ಖ್ಯಾತ ಸ್ಟಾರ್ ನಟ ಶರತ್ ಕುಮಾರ್ ದಂಪತಿಗೆ ಜೈಲು ಶಿಕ್ಷೆ

ಚೆನ್ನೈ : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸ್ಟಾರ್ ನಟ ಶರತ್ ಕುಮಾರ್ ಹಾಗಾ ಪತ್ನಿ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ಶರತ್​ ಕುಮಾರ್​ ಮತ್ತು ರಾಧಿಕಾ ಪಾಲುದಾರಿಕೆಯ ಮ್ಯಾಜಿಕ್​ ಫ್ರೇಂ ಸಂಸ್ಥೆಯು 2014ರಲ್ಲಿ ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್​ ನಟನೆಯಲ್ಲಿ ವಾಟ್​ ಎ ಮ್ಯಾಜಿಕ್​ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ರೆಡಿಯನ್ಸ್​ ಎಂಬ ಮೀಡಿಯಾ ಫೈನಾನ್ಸ್​ ಕಂಪನಿಯಿಂದ ರಾಧಿಕಾ, ಶರತ್​ ಕುಮಾರ್​ ಹಾಗೂ ನಿರ್ಮಾಪಕ ಲಿಸ್ಟಿನ್​ ಸ್ಟೇಪನ್ನ ಮಾಜ್ಯಿಕ್​ ಪ್ರೇಮ್ಸ್​ ಎಂಬ ಕಂಪನಿಗಾಗಿ​ 1. 5 ಕೋಟಿ ಹಣವನ್ನು ಸಾಲ ಪಡೆದಿದ್ದರು.

ಈ ಹಣವನ್ನು 2015ರಲ್ಲಿ ಮರಳಿಸುವುದಾಗಿ ಈ ದಂಪತಿ ಭರವಸೆ ನೀಡಿದ್ದರು. ಅಲ್ಲದೇ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಹಣ ಹಿಂದಿರುಗಿಸುವುದಾಗಿ ಹೇಳಿದ್ದ ಈ ದಂಪತಿ ಮಾತು ತಪ್ಪಿದ್ದರು. ಈ ಹಣವನ್ನು ಬಳಸಿಕೊಂಡು ಈ ತಾರಾ ದಂಪತಿ ಮತ್ತೊಂದು ಚಿತ್ರ ನಿರ್ಮಾಣ ಮಾಡಿದ್ದರು. ಬಳಿಕ ಈ ಹಣವನ್ನು ಎರಡು ಚೆಕ್​ ಮೂಲಕ ಹಿಂತಿರುಗಿಸಿದ್ದರು.

ಇದಾದ ಬಳಿಕ ಶರತ್​ ಕುಮಾರ್​ ತಮ್ಮ ಕಂಪನಿಗಾಗಿ 50 ಲಕ್ಷ ನಗದನ್ನು ಮತ್ತೆ ಪಡೆದಿದ್ದರು. 10 ಲಕ್ಷದಂತೆ ಐದು ಚೆಕ್​ ಮೂಲಕ ಈ ಹಣವನ್ನು ಹಿಂತಿರುಗಿಸಿದ್ದರು. ಆದರೆ, ಈ ಚೆಕ್​ಗಳು ಬೌನ್ಸ್​ ಆಗಿತ್ತು. ಇದಾದ ಬಳಿಕ ರೇಡಿಯನ್ಸ್​ ಸಂಸ್ಥೆ ಮ್ಯಾಜಿಕ್​ ಫ್ರೇಮ್ಸ್​ ಸಂಸ್ಥೆ ಚೆಕ್​ ಬೌನ್ಸ್​ ಆರೋಪದ ಅಡಿ ನ್ಯಾಯಾಲಯದಲ್ಲಿ ಮೊಕದ್ಧಮೆ ಹೂಡಿತು.

ಈ ವೇಳೆ ಬಡ್ಡಿ ಹೆಚ್ಚಿರುವ ಹಿನ್ನಲೆ ಹಣವನ್ನು ತಕ್ಷಣಕ್ಕೆ ಮರು ಪಾವತಿಸಲು ಸಾಧ್ಯವಿಲ್ಲ ಎಂದು ಮ್ಯಾಜಿಕ್​ ಫ್ರೇಮ್ಸ್​ ಸಂಸ್ಥೆ ವಾದಿಸಿತು. ಸಾಲ ಮರುಪಾವತಿಗೆ ಚೆಕ್​ ನೀಡಿದ ಬಳಿಕವೂ ಅದು ಬೌನ್ಸ್​ ಆಗಿತ್ತು. ಈ ಆರೋಪದ ಹಿನ್ನಲೆ ಈ ದಂಪತಿ ಹಾಗೂ ನಿರ್ಮಾಪಕ ಲಿಸ್ಟಿನ್​ ಸ್ಟೇಪನ್ನ ಅವರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!