ಚತ್ತೀಸ್ ಘಡದಲ್ಲಿ ನಕ್ಸಲರ ವಿರುದ್ಧದ ಹೋರಾಟದ ವೇಳೆ ನಾಪತ್ತೆಯಾದ 21 ಯೋಧರು ಹುತಾತ್ಮರಾಗಿದ್ದಾರೆ.
ಸುಕುಮ- ಬಿಜಾಪುರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಕ್ಸಲರು ದಾಳಿ ನಡೆಸಿದ್ದಕ್ಕೆ ಪ್ರತಿದಾಳಿ ನಡೆಸಿದ ಯೋದರು ಎನ್ ಕೌಂಟರ್ ಆರಂಭಿಸಿದ್ದರು. ಇದರಲ್ಲಿ 5 ಯೋಧರು ಹುತಾತ್ಮರಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಮೃತಪಟ್ಟಿದ್ದರು.
ದಾಳಿಯ ವೇಳೆ ನಾಪತ್ತೆಯಾಗಿದ್ದ 22 ಯೋಧರು ಹುತಾತ್ಮಕರಾಗಿದ್ದಾರೆ ಎಂದು ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಘೋಷಿಸಿದ್ದಾರೆ. ಹುತಾತ್ಮರಾದವರಲ್ಲಿ ಸಿಆರ್ ಪಿಎಫ್ ಮತ್ತು ಜಿಲ್ಲಾ ಗಡಿ ರಕ್ಷಣಾ ಪಡೆಯ ಯೋಧರು ಸೇರಿದ್ದಾರೆ.
ಯೋಧರ ಸಾವಿಗೆ ರಾಷ್ಟ್ರಪತಿ ರಾಮನಾಥನ್ ಕೋವಿಂದ್ ಆಘಾತ ವ್ಯಕ್ತಪಡಿಸಿದ್ದು, ಇದು ಹೇಡಿಗಳು ಮಾಡುವ ಕೃತ್ಯ ಎಂದು ಕಿಡಿ ಕಾರಿದ್ದಾರೆ.