ಮೇಘ ಸ್ಫೋಟದಿಂದ ಕೋಟ್ಯಂತರ ರೂ ಆಸ್ತಿ-ಪಾಸ್ತಿ ನಷ್ಟ ಉಂಟಾಗಿರುವ ಘಟನೆ ಉತ್ತರಾಖಂಡದ ದಶರಥ ದಂಡ ಪರ್ವತ ಎಂಬ ಪ್ರದೇಶದಲ್ಲಿ ಸಂಭವಿಸಿದೆ.
ದೊಡ್ಡ ಬಂಡೆಗಳು ಉರುಳಿ ಕ್ಯಾಂಟುರಾ ಸ್ವೀಟ್ ಶಾಪ್, ಅಸ್ವಾಲ್ ಜ್ಯುವೆಲ್ಲರ್ಸ್ ಸೇರಿ ಪೀಠೋಪಕರಣದ ಅಂಗಡಿಗಳು ಹಾನಿಗೊಳಗಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾನಿ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಶ್ರೀನಗರದಿಂದ ಎಸ್ಡಿಆರ್ಎಫ್ ತಂಡ ಸ್ಥಳಕ್ಕೆ ದೌಡಾಯಿಸಿದೆ. ಸ್ಥಳದಲ್ಲೇ ಅಧಿಕಾರಿಗಳು ಮೊಕ್ಕಾಂ ಹೂಡಿದೆ.