ತುಮಕೂರು: ಸಾರಿಗೆ ನೌಕರರ ಚಳುವಳಿಯನ್ನ ಹತ್ತಿಕ್ಕುವುದಕ್ಕೆ ಸರ್ಕಾರ ಶಕ್ತಿಮೀರಿ ಕೆಲಸ ಮಾಡುತ್ತಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಾರಿಗೆ ಬಸ್‌ಗಳನ್ನ ಓಡಿಸೋಕೆ ಖಾಸಗಿ ಬಸ್ ಚಾಲಕರನ್ನ ನೇಮಿಸಿಕೊಂಡು ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದೆ. ಸರ್ಕಾರದ ಪ್ರಯತ್ನ ಎಷ್ಟರ ಮಟ್ಟಿಗೆ ಫಲಿಸುತ್ತೋ ಕಾದುನೋಡಬೇಕಿದೆ ಎಂದರು.
ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಂದಿ ಸರ್ಕಾರಿ ನೌಕರರ ಅರ್ಧದಷ್ಟು ಕಡಿಮೆಗೆ ಕೆಲಸ ಮಾಡುತ್ತಿದ್ದಾರೆ. ಆ ಸಂಬಳ ತೆಗೆದುಕೊಂಡು ಬದುಕು ಸಾಗಿಸುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ನೊಂದವರಿಗೆ ನ್ಯಾಯ ಕೊಡುವ ಬದಲು ಧಮನಕಾರಿ ನೀತಿಯನ್ನ ಯಾವಾಗ ಶುರು ಮಾಡಿತೋ ಅಂದಿನಿಂದ ಸತ್ಯಾಗ್ರಹವಾಗಿ ಪತಿವರ್ತನೆಯಾಗಿದೆ. ಇದೀಗ ನೌಕರರ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವದಿ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ.ಸಾರಿಗೆ ಇಲಾಖೆಯನ್ನ ಸೇವಾವಲಯ ಎಂದು ಸರ್ಕಾರ ಘೋಷಣೆ ಮಾಡಿದೆ. ಹಾಗಾಗಿ, ನಷ್ಟವಾದರೆ ಸರ್ಕಾರವೇ ಸರಿದೂಗಿಸಿಕೊಳ್ಳಬೇಕು ಎಂದರು.
ಸಾರಿಗೆ ನೌಕರರು ಯಾವ ತಪ್ಪು ಮಾಡಿದ್ದಾರೆ ಅಂತಾ ಸರ್ಕಾರ ಎಸ್ಮಾ ಜಾರಿ ಮಾಡಿದೆ. ಅನ್ಯಾಯವನ್ನ ಪ್ರಶ್ನೆ ಮಾಡಿದ್ದಕ್ಕೆ ಎಸ್ಮಾ ಜಾರಿ ಮಾಡುವುದು ಎಷ್ಟು ಸರಿ. ಕೆಲ ಜಾತಿಯ ಮಠ ಮಾನ್ಯಗಳಿಗೆ ಅನುದಾನ ಕೊಡಲು ನಿಮ್ಮಲ್ಲಿ ಹಣವಿದೆ. ಅದೇ ಬಡ ಸಾರಿಗೆ ಇಲಾಖೆ ನೌಕರರಿಗೆ ಕೊಡಲು ದುಡ್ಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.