ಮೈಸೂರು : ವ್ಯಕ್ತಿಯೋರ್ವ ತನ್ನ ತಾಯಿ, ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಸ್ವಾಮಿನಹುಂಡಿ ಗ್ರಾಮದಲ್ಲಿ ಮಣಿಕಂಠ ಎಂಬಾತ ತನ್ನಿಬ್ಬರು ಮಕ್ಕಳಾದ 1 ವರ್ಷದ ರೋಹಿತ್, ಎರಡೂವರೆ ವರ್ಷ ಸಾಮ್ರಾಟ್ ಹಾಗೂ ಗರ್ಭಿಣಿ ಹೆಂಡತಿ ಗಂಗಾ, ತಾಯಿ ಕೆಂಪಮ್ಮರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಸ್ಥಳದಿಂದ ಆರೋಪಿ ಮಣಿಕಂಠ ಪರಾರಿ ಪರಾರಿಯಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಸರಗೂರು ಪೊಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.