ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಆಯ್ತು, ಈಗ ದೇಶದಲ್ಲಿ ಮೊದಲ ಬಾರಿ ಚಿತ್ರದುರ್ಗದಲ್ಲಿ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಚಿತ್ರದುರ್ಗದ 50 ವರ್ಷದ ರೋಗಿಯಲ್ಲಿ ಸ್ಕಿನ್ ಮ್ಯೂಕರ್ ಮೈಕೋಸಿಸ್ ಎಂಬ ಚಮರ್ದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದ ವ್ಯಕ್ತಿ ಮಧುಮೇಹದಿಂದ ಬಳಲುತ್ತಿದ್ದು, ಈ ವ್ಯಕ್ತಿಯಲ್ಲಿ ಚರ್ಮದ ಕಪ್ಪು ಶಿಲೀಂಧ್ರ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
ಬಲ ಕಿವಿಯ ಸಮೀಪ ಚರ್ಮದ ಕಪ್ಪು ಶಿಲೀಂಧ್ರ ರೋಗ ಪತ್ತೆಯಾಗಿದ್ದು, ಈ ಕಾಯಿಲೆಯಿಂದ ಕಿವಿಯ ಬಳಿ ಚರ್ಮವೇ ಕಿತ್ತು ಬಂದಿದ್ದು, ಚರ್ಮ ಕಿತ್ತು ಬಂದ ಜಾಗದಲ್ಲಿ ಸುಟ್ಟಿರುವಂತೆ ಕಪ್ಪು ಕಂಡು ಬಂದಿದೆ.
ಭಾರತದಲ್ಲೇ ಪ್ರಪ್ರಥಮ ಚರ್ಮದ ಬ್ಲ್ಯಾಕ್ ಫಂಗಸ್ ಪ್ರಕರಣ ಇದಾಗಿದೆ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.