ನವದೆಹಲಿ: ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯ ವಿಮಾನಯಾನಗಳಲ್ಲಿ ಇನ್ನುಮುಂದೆ ಆನ್ ಬೋರ್ಡ್ ಆಹಾರವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇಶಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಪ್ರಯಾಣದ ಪೂರ್ಣ ಸಮಯವೂ ಮಾಸ್ಕ್ ಧರಿಸಿಯೇ ಇರಬೇಕೆಂಬ ನಿರ್ದೇಶನಕ್ಕೆ ಪೂರಕವಾಗಿ ನಾಗರೀಕ ವಿಮಾನಯಾನ ಸಚಿವಾಲಯವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರದಿಂದ ಈ ನಿಷೇಧ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮೇ 25 ರಂದು, ಲಾಕ್ ಡೌನ್ ಕಾರಣ ಸುಮಾರು ಎರಡು ತಿಂಗಳ ನಂತರ ದೇಶೀಯ ಪ್ರಯಾಣಿಕರ ಹಾರಾಟದ ಕಾರ್ಯಾಚರಣೆಯನ್ನು ಪುನರಾರಂಭಿಸಿತು.