ಬೈಪಾಸ್ ಸರ್ಜರಿಗೆ ಒಳಗಾಗಿದ್ದ ರಾಷ್ಟ್ರಪತಿ ರಾಮನಾಥನ್ ಕೋವಿಂದ್ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ರಾಷ್ಟ್ರಪತಿ ಭವನ್ ಗೆ ಮರಳಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಗೆ ವಾರದ ಹಿಂದೆ ದಾಖಲಾಗಿದ್ದ ರಾಮನಾಥನ್ ಕೋವಿಂದ್ ಸೋಮವಾರ ಸಂಜೆ ಟ್ವೀಟ್ ಮಾಡಿ, ನಾನು ಪೂರ್ಣವಾಗಿ ಚೇತರಿಸಿಕೊಂಡಿದ್ದು, ರಾಷ್ಟ್ರಪತಿ ಭವನಕ್ಕೆ ಮರಳಿದ್ದೇನೆ ಎಂದರು.