ಕಾರವಾರ: ಕಾರು ಮತ್ತು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ಹೆಬ್ಬುಳ ಬಳಿ ನಡೆದಿದೆ.
ಮೃತರನ್ನು ಅವರ್ಸಾದ ಗುರುಪ್ರಸಾದ ಅಣ್ವೇಕರ (32) ಹಾಗೂ ಅವರ ಅಕ್ಕನ ಮಗಳು ಸಂಜನಾ ಸಂತೋಷ ರಾಯ್ಕರ (7) ಎಂದು ಗುರುತಿಸಲಾಗಿದೆ.
ಸಂತೋಷ ರಾಯ್ಕರ, ಪತ್ನಿ ಅಶ್ವಿನಿ ರಾಯ್ಕರ, ಮಗ ಸೋಹಂ ರಾಯ್ಕರ ಹಾಗೂ ಪ್ರೀತಂ ರೇವಣಕರ ಇವರಿಗೆ ಗಾಯಗಳಾಗಿದ್ದು, ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ತಕ್ಷಣ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.