ಆಗ್ರಾದಲ್ಲಿ 3 ದಕ್ಷಿಣ ಆಫ್ರಿಕಾ ಮಾದರಿ ಹಾಗೂ ಒಂದು ಗುರುತು ಸಿಗದ ಹೊಸ ಮಾದರಿಯ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಕೊರೊನಾದ 2ನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಮತ್ತೊಂದು ಆತಂಕ ಎದುರಾಗಿದೆ.
ಹೊಸದಾಗಿ 14 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 4 ವಿದೇಶೀ ತಳಿಯ ಸೋಂಕು ಪತ್ತೆಯಾಗಿದ್ದು, 3 ದಕ್ಷಿಣ ಆಫ್ರಿಕಾ ಮೂಲದ ಸೋಂಕು ಆಗಿದ್ದರೆ ಒಂದು ಮಾದರಿಯ ಸೋಂಕಿ ಯಾವುದು ಎಂಬುದು ಪತ್ತೆಯಾಗಿಲ್ಲ.
ಹೊಸದಾಗಿ ಪತ್ತೆಯಾಗಿರುವ ಸೋಂಕು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ ಇದು ಯಾವ ಮಾದರಿಯ ಸೋಂಕು ಎಂಬುದು ತಿಳಿದು ಬಂದಿಲ್ಲ ಎಂದು ಹಿರಿಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿಢೀರನೆ ಹೆಚ್ಚು ಕಂಡು ಬಂದಿದ್ದರಿಂದ 12 ವರ್ಷದ ಬಾಲಕ ಸೇರಿದಂತೆ 7 ಮಂದಿಯ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ನಾಲ್ಕು ಮಂದಿಯದ್ದು ಭಿನ್ನ ವೈರಸ್ ಪತ್ತೆಯಾಗಿದ್ದು, ಒಬ್ಬರ ಸೋಂಕಿನ ಮೂಲವೇ ತಿಳಿದು ಬಂದಿಲ್ಲ. ಇದು ಹೊಸ ಮಾದರಿಯದ್ದಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.