ವಯಸ್ಸಿಗೆ ಬಂದ ಸ್ವಂತ ಮಗನನ್ನೇ ಮದುವೆ ಆಗಲು ಅನುಮತಿ ನೀಡಿ ಎಂದು ಮಹಿಳೆಯೊಬ್ಬಳು ಅಮೆರಿಕದ ನ್ಯಾಯಾಲಯದ ಮೆಟ್ಟಿಲೇರಿದ ವಿಚಿತ್ರ ಘಟನೆ ವರದಿಯಾಗಿದೆ.
ವೈಯಕ್ತಿಕ ಸ್ವಾತಂತ್ರ್ಯದ ಆಧಾರದ ಮೇಲೆ ಮದುವೆಗೆ ಅನುಮತಿ ನೀಡಬೇಕು. ಈ ಸಂಬಂಧ ಕಾನೂನಿನಲ್ಲಿ ವಿಧಿಸಿರುವ ಅಡ್ಡಿಗಳನ್ನು ನಿವಾರಿಸಿಕೊಡಬೇಕು ಎಂದು ನ್ಯೂಯಾರ್ಕ್ ನ ಮ್ಯಾನ್ ಹಟನ್ ಕುಟುಂಬದ ಮಹಿಳೆ ಹೇಳಿದರು.
ಸಮಾಜದಲ್ಲಿ ಸಾಮಾಜಿಕ, ದೈಹಿಕ ಹಾಗೂ ಧಾರ್ಮಿಕ ಅನುಮತಿ ನೀಡಬೇಕು. ಈ ಮೂಲಕ ಅಲ್ಲದೇ ಇಬ್ಬರೂ ವಯಸ್ಕರಾಗಿರುವುದರಿಂದ ಯಾವುದೇ ಅಡ್ಡಿ ಇಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ರೀತಿಯ ಮನವಿಗೆ ಅನುಮತಿ ದಿಢೀರ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ದತ್ತುಪಡೆದ ಮಗುವನ್ನು ಮದುವೆ ಆಗಿರುವ ಉದಾಹರಣೆಗಳಿವೆ. ಆದರೆ ಹೆತ್ತಮಗನನ್ನು ಮದುವೆ ಆಗುವುದು ಎಷ್ಟು ಸರಿ ಎಂದು ಕೋರ್ಟ್ ಪ್ರಶ್ನಿಸಿದೆ.