ದೇಶದಲ್ಲಿ ಕಳೆದ ಒಂದು ದಿನದಲ್ಲಿ 1,84,372 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 1072 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಯುಗಾದ ಹಬ್ಬದ ದಿನ 1.84 ಲಕ್ಷ ಸೋಂಕು ಪತ್ತೆಯಾಗಿರುವುದು ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಪತ್ತೆಯಾದ ಅತೀ ಹೆಚ್ಚು ಪ್ರಕರಣಗಳಾಗಿವೆ.
ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,38,73,825ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 1,72,085ಕ್ಕೆ ಜಿಗಿತ ಕಂಡಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 13,65,704ಕ್ಕೆ ತಲುಪಿದ್ದು, ಗುಣಮುಖಿತರ ಸಂಖ್ಯೆ 1,23,36,036ಕ್ಕೆ ಜಿಗಿತ ಕಂಡಿದೆ.