ವಾಷಿಂಗ್ಟನ್: ಕೊರೋನಾ ವೈರಸ್ ವಿಶ್ವಾದ್ಯಂತ ಕಳೆದ ಒಂದು ವರ್ಷದಿಂದ ತಲ್ಲಣ ಮೂಡಿಸಿದೆ. ಈಗಾಗಲೇ ವಿಶ್ವದ ಕೆಲ ದೇಶಗಳು ಕೊರೋನಾ ಎರಡನೇ ಅಲೆಗೆ ಬೆಚ್ಚಿ ಬಿದ್ದಿದ್ದು, ಲಾಕ್ಡೌನ್ ಘೋಷಿಸಿವೆ.
ಈ ನಡುವೆ ಅಮೆರಿಕ ಕೊರೋನಾ ಸೋಂಕು ಪತ್ತೆಹಚ್ಚುವ ಮೈಕ್ರೋಚಿಪ್ ಅಭಿವೃದ್ಧಿಪಡಿಸಿದೆ. ಈ ಮೈಕ್ರೋಚಿಪ್ ದೇಹದಲ್ಲಿನ ಕೊರೋನಾ ವೈರಸ್ ಲಕ್ಷಣಗಳನ್ನು ಸುಲಭವಾಗಿ ಗುರ್ತಿಸುತ್ತದೆ. ಅಮೆರಿಕದ ರಕ್ಷಣಾ ಇಲಾಖೆಯ ಸಂಶೋಧಕರು ಈ ಮೈಕ್ರೋಚಿಪ್ನ್ನು ಅಭಿವೃದ್ಧಿ ಪಡಿಸಿದ್ದಾರೆ.
ದೇಹದ ಯಾವುದೇ ಭಾಗದ ಚರ್ಮದ ಕೆಳಗೆ ಈ ಮೈಕ್ರೋಚಿಪ್ನ್ನು ಅಂಟಿಸಲಾಗುತ್ತದೆ. ಮೈಕ್ರೋಚಿಪ್ನ್ನು ನಿರಂತರವಾಗಿ ರಕ್ತ ಪರೀಕ್ಷಿಸಿ ವರದಿ ತಯಾರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಚಿಪ್ನ್ನು ಚರ್ಮದೊಳಗೆ ಅಂಟಿಸಿಕೊಂಡ ಮೂರರಿಂದ ಐದು ದಿನಗಳಲ್ಲಿ ನಿಖರ ಫಲಿತಾಂಶವನ್ನು ಪಡೆಯಬಹುದು.
ಈ ಮೂಲಕ ಭವಿಷ್ಯದ ಯಾವುದೇ ರಾಸಾಯನಿಕ ಮತ್ತು ಜೈವಿಕ ದಾಳಿಯನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.