ಕ್ಯಾಲಿಫೋರ್ನಿಯಾ: ಬಂದೂಕು ಹಿಡಿದ ವ್ಯಕ್ತಿ ಕಟ್ಟದೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ ಘಟನೆ ಕ್ಯಾಲಿಫೋರ್ನಿಯಾದ ಆರೆಂಜೆಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.
ಈ ಸಂಬಂಧ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಲಭಿಸಿವೆ. ಕೈಯಲ್ಲಿ ಬಂದೂಕನ್ನು ಹಿಡಿದ ಬಾಲಕನೊಬ್ಬ ತನ್ನ ತಾಯಿಯೊಂದಿಗೆ ಕಟ್ಟಡವನ್ನು ಪ್ರವೇಶಿಸುವ ದೃಶ್ಯ ಪೊಲೀಸರಿಗೆ ಲಭಿಸಿದೆ. ಸದ್ಯ ಬಾಲಕ ಮತ್ತು ಆತನ ತಾಯಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಜನಾಂಗೀಯ ದ್ವೇಷಕ್ಕೆ ಈ ಶೂಟೌಟ್ ನಡೆದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಕೆಲದಿನಗಳ ಹಿಂದಷ್ಟೇ ಅಮೆರಿಕದ ಅಟ್ಲಾಂಟಾ ನಗರದಲ್ಲಿ ನಡೆದ ಗುಂಡಿನ ದಾಳಿಗೆ 8 ಜನ ಬಲಿಯಾಗಿದ್ದರು. ಅಟ್ಲಾಂಟಾದ ಹೊರವಲಯದ ಆಕ್ವರ್ತ್ ಗ್ರಾಮೀಣ ಭಾಗದಲ್ಲಿದ್ದ ಯಂಗ್ಸ್ ಏಷ್ಯನ್ ಮಸಾಜ್ ಪಾರ್ಲರ್, ಬಕ್ಹೆಡ್ ಪ್ರದೇಶದಲ್ಲಿದ್ದ ಗೋಲ್ಡ್ ಸ್ಪಾ ಹಾಗೂ ಅದೇ ಸ್ಥಳದಲ್ಲಿದ್ದ ಇನ್ನೊಂದು ಮಸಾಜ್ ಪಾರ್ಲರ್ ಅರೋಮಾಥೆರಪಿ ಸ್ಪಾದಲ್ಲಿ ಆಗುಂತಕರಿಂದ ಶೂಟೌಟ್ ನಡೆದಿತ್ತು. ಶೂಟೌಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.