ಉಕ್ರೇನ್ ಸೇನೆ ಸಿಡಿಸಿದ ಬಾಂಬ್ ಗಳಿಂದ ಗಡಿಯಲ್ಲಿ ನೆಲೆಯೂರಿದ್ದ ರಷ್ಯಾದ ಶಿಬಿರಗಳು ಧ್ವಂಸಗೊಂಡಿವೆ ಎಂದು ರಷ್ಯಾ ಆರೋಪಿಸಿದೆ.
ರಷ್ಯಾ ಫೆಡರಲ್ ಸೆಕ್ಯೂರೆಟಿ ಏಜೆನ್ಸಿ (ಎಫ್ ಎಸ್ ಬಿ) ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ರಷ್ಯಾದ ಗಡಿಯಾದ ರೊಸ್ಕೊನಲ್ಲಿ ಇದ್ದ ಶಿಬಿರಗಳ ಮೇಲೆ ಉಕ್ರೇನ್ ಕಡೆಯಿಂದ ಶೆಲ್ ದಾಳಿ ನಡೆದಿದ್ದು, ಶಿಬಿರಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಹೇಳಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ 150 ಕಿ.ಮೀ. ಮಧ್ಯದ ಗಡಿ ಭಾಗದಲ್ಲಿ ಈ ಘಟನೆ ನಡೆದಿದೆ ಎಂದು ರಷ್ಯಾ ಹೇಳಿದೆ.
ಇದೇ ವೇಳೆ ಉಕ್ರೇನ್ ದೇಶದಲ್ಲಿನ ರಷ್ಯಾ ಪ್ರತ್ಯೇಕತಾವಾದಿಗಳ ವಿರುದ್ಧದ ಕದನ ವಿರಾಮವನ್ನು ಘೋಷಿಸಿದೆ. ಇದರ ಬೆನ್ನಲ್ಲೇ ರಷ್ಯಾ ಮಾಡಿರುವ ಆರೋಪ ಗಂಭೀರ ಸ್ವರೂಪ ಮಾಡಿದೆ.