ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಮುಖ್ಯವಾಗಿ ಇಂಧನ ಕೊರತೆ ಶ್ರೀಲಂಕಾವನ್ನ ಇನ್ನಿಲ್ಲದಂತೆ ಬಾಧಿಸುತ್ತಿದೆ.
ಪೆಟ್ರೋಲ್ ಖಾಲಿಯಾದ ಪರಿಣಾಮ ದ್ವೀಪ ರಾಷ್ಟ್ರದಲ್ಲಿ ಇದೀಗ ಶಾಲೆ ಕಾಲೇಜು ಬಂದ್ ಆಗಿದೆ. ತುರ್ತು ಸೇವೆಗಳ ಕಚೇರಿ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರೆಯಲಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಲಕಟ್ಟಲು ಆಗದೇ ಕೈ ಎತ್ತಿದೆ. 78 ಮಿಲಿಯನ್ ಡಾಲರ್ ಸಾಲಪಾವತಿಸಲು ನೀಡಲಾಗಿದ್ದ ಗ್ರೇಸ್ ಅವಧಿ ಶುಕ್ರವಾರಕ್ಕೆ ಕೊನೆಯಾಗಿದೆ. ಈ ಮೂಲಕ ಲಂಕಾ ಅಧಿಕೃತವಾಗಿ ಡಿಫಾಲ್ಟ್ ದೇಶಗಳ ಬಗ್ಗೆ ಪಟ್ಟಿ ಸೇರಿದೆ. ಇನ್ನೊಂದೆಡೆ ಇಲ್ಲಿನ ಜನ ಅನ್ನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ.
ಇದನ್ನೂ ಓದಿ :- ಸಮುದ್ರದಲ್ಲಿ ಚೇಸಿಂಗ್ ಮಾಡಿದ ಅಧಿಕಾರಿಗಳು – 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ