ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಮುಖ್ಯವಾಗಿ ಇಂಧನ ಕೊರತೆ ಶ್ರೀಲಂಕಾವನ್ನ ಇನ್ನಿಲ್ಲದಂತೆ ಬಾಧಿಸುತ್ತಿದೆ.
![ಫೇಸ್ ರೆಕಗ್ನಿಷನ್ಗೆ ಫೇಸ್ಬುಕ್ ಗುಡ್ಬೈ | udayavani](https://mc.webpcache.epapr.in/mcms.php?size=large&in=https://mcmscache.epapr.in/post_images/website_394/post_27357768/full.jpg)
ಪೆಟ್ರೋಲ್ ಖಾಲಿಯಾದ ಪರಿಣಾಮ ದ್ವೀಪ ರಾಷ್ಟ್ರದಲ್ಲಿ ಇದೀಗ ಶಾಲೆ ಕಾಲೇಜು ಬಂದ್ ಆಗಿದೆ. ತುರ್ತು ಸೇವೆಗಳ ಕಚೇರಿ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರೆಯಲಿದೆ ಎಂಬುದು ಯಾರಿಗೂ ತಿಳಿದಿಲ್ಲ.
![ಔಷಧಿಯ ಮೇಲಿನ ದರ ಶೇ.40 ರಷ್ಟು ಏರಿಸಿದ ಲಂಕಾ ಸರ್ಕಾರ – Public TV](https://publictvin.b-cdn.net/wp-content/uploads/2022/03/SRILANKA-1.jpg)
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಲಕಟ್ಟಲು ಆಗದೇ ಕೈ ಎತ್ತಿದೆ. 78 ಮಿಲಿಯನ್ ಡಾಲರ್ ಸಾಲಪಾವತಿಸಲು ನೀಡಲಾಗಿದ್ದ ಗ್ರೇಸ್ ಅವಧಿ ಶುಕ್ರವಾರಕ್ಕೆ ಕೊನೆಯಾಗಿದೆ. ಈ ಮೂಲಕ ಲಂಕಾ ಅಧಿಕೃತವಾಗಿ ಡಿಫಾಲ್ಟ್ ದೇಶಗಳ ಬಗ್ಗೆ ಪಟ್ಟಿ ಸೇರಿದೆ. ಇನ್ನೊಂದೆಡೆ ಇಲ್ಲಿನ ಜನ ಅನ್ನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ.
ಇದನ್ನೂ ಓದಿ :- ಸಮುದ್ರದಲ್ಲಿ ಚೇಸಿಂಗ್ ಮಾಡಿದ ಅಧಿಕಾರಿಗಳು – 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ