ಬೆಳಗಾವಿ : ಇಲ್ಲಿನ ಬಿಮ್ಸ್‌ಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭೇಟಿ ವೇಳೆ ಕೋವಿಡ್ ವಾರ್ಡ್‌ನಲ್ಲಿ ಮೃತದೇಹ ಇದ್ದ ವಿಚಾರವಾಗಿ ಭೀಮ್ಸ್ ಅಧಿಕಾರಿಗಳು
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಬೀಮ್ಸ್ ಸ್ಟಾಫ್ ನರ್ಸ್ ಗಳು ಗಂಭೀರ ಆರೋಪ ಮಾಡಿದ್ದಾರೆ. 7 ಜನ ನರ್ಸ್ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಜಿಲ್ಲಾ ಸರ್ಜನ್ ಆದೇಶ ಹೊರಡಿಸಿದ್ದಾರೆ.
ನಿವೃತ್ತಿಯ ದಿನವೇ ಜಿಲ್ಲಾ ಸರ್ಜನ್ ಡಾ.ಹುಸೇನ್‌ಸಾಬ್ ಖಾಜಿ ಸ್ಟಾಫ್ ನರ್ಸಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ. ಆದರೆ, ಮಾಧ್ಯಮಗಳ ಎದುರು ಬಿಮ್ಸ್ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು ಹೇಳಿದ್ದೆ ಬೇರೆ, ಡಿಸಿಎಂ ಸವದಿ ಭೇಟಿ ವೇಳೆ ಐವರು ರೋಗಿಗಳು ಮೃತಪಟ್ಟಿದ್ದರು. ಸಂಬಂಧಪಟ್ಟ ವೈದ್ಯರು ಇಲ್ಲದೇ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಲ್ಲ ಯಾಕೆಂದ್ರೆ ಡಾಕ್ಡರ್ ಬಂದು ರೋಗಿ ಮೃತಪಟ್ಟಿದ್ದಾನೆ ಎಂದು ದೃಢಪಡಿಸುವವರೆಗೂ ನಮಗೆ ಶವ ಪ್ಯಾಕ್ ಮಾಡಲು ಅವಕಾಶ ಇಲ್ಲ. ರೋಗಿ ಮೃತಪಟ್ಟು ನಾಲ್ಕು ಐದು ಗಂಟೆ ಕಳೆದರೂ ಅದನ್ನು ದೃಢಪಡಿಸಲು ಡಾಕ್ಟರ್ ಗಳು ಬರೋದಿಲ್ಲ, ಮೃತದೇಹ ಪ್ಯಾಕ್ ಮಾಡಲು ಸಮಯಕ್ಕೆ ಸರಿಯಾಗಿ ಮೆಟೀರಿಯಲ್ಸ್ ಕೊಡಲ್ಲ, ಶವಾಗಾರಕ್ಕೆ ಮೃತದೇಹಗಳನ್ನು ಸ್ಥಳಾಂತರಿಸಲು ಇರುವುದು ಒಂದೇ ಆ್ಯಂಬುಲೆನ್ಸ್’ಇಂತಹ ಸಮಯದಲ್ಲಿ ಮೃತದೇಹ ಶಿಫ್ಟ್ ಮಾಡಿಲ್ಲ ಅಂತಾ ನಮ್ಮನ್ನ ಹೊಣೆಗಾರರನ್ನಾಗಿ ಮಾಡುವದು ನ್ಯಾಯವೇ ಅನ್ನೋದು ಸ್ಟಾಫ್ ನರ್ಸ್ ಗಳ ಪ್ರಶ್ನೆಯಾಗಿದೆ.
‘ಜೀವವನ್ನು ಪಣಕ್ಕಿಟ್ಟು ಕೋವಿಡ್ ಡ್ಯೂಟಿ ಮಾಡಿ ನಾವು ರೋಗಿಗಳ ಸೇವೆ ಮಾಡ್ತಿದೀವಿ’ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸದೇ ನಮಗೆ ಮೆಮೋ, ರಿಲೀವ್ ಆರ್ಡರ್ ಕೊಟ್ಟಿದ್ದಾರೆ. ಮೇಲಾಧಿಕಾರಿಗಳ ತಪ್ಪಿಗೆ ನಮಗೆ ಶಿಕ್ಷೆ ಕೊಡುತ್ತಿದ್ದಾರೆ. ಸೂಕ್ತ ನ್ಯಾಯ ದೊರಕಿಸಿ ಕೊಡುವಂತೆ ಮಾಧ್ಯಮಗಳ ಎದುರು ಬೀಮ್ಸ್ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.