ರಾಯಚೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿನ್ನೆ ಒಂದೇ ದಿನ ಸಾವಿರಗಡಿ ದಾಟಿದೆ. ಸೋಂಕನ್ನ ಹತೋಟಿಗೆ ತರಲು ಜಿಲ್ಲಾಡಳಿತಕ್ಕೆ ಒಂದು ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಆದ್ದರಿಂದ ನಾಳೆಯಿಂದ ಜಿಲ್ಲೆಯಾದ್ಯಂತ ಮೂರ ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಗೊಳಿಸಿ ಆದೇಶಿಸಿದೆ.
ದಿನಬಳಕೆ ವಸ್ತುಗಳ ಖರೀದಿಗೂ ಅವಕಾಶ ನೀಡದೆ, ಕೇವಲ ಮೆಡಿಕಲ್ ಶಾಪ್, ಆಸ್ಪತ್ರೆ ಮತ್ತು ಪೆಟ್ರೋಲ್ ಬಂಕ್ ಗಳು ಮಾತ್ರ ತೆರೆಯಲಿವೆ, ಮದ್ಯವು ಮೂರು ದಿನಗಳು ತೆರೆಯುವುದಿಲ್ಲ ಎಂಬ ಮಾಹಿತಿ ಆತಂಕಕ್ಕೆ ಒಳಗಾಗಿದ್ದ ಮದ್ಯ ಪ್ರೀಯರು ಮೂರು ದಿನಗಳ ಮದ್ಯ ದೊರೆಯದು ಎನ್ನುವ ಕಾರಣಕ್ಕೆ ಮದ್ಯ ಖರೀದಿಸಲು, ಮದ್ಯ ಅಂಗಡಿ ಬಳಿ ಮುಗಿ ಬಿದ್ದಿರುವ ದೃಶ್ಯ ಕಂಡು ಬಂತು.
ಮದ್ಯ ಖರೀದಿಗೆ ನಾ ಮುಂದು, ತಾ ಮುಂದು ಮುಗಿಬಿದ್ದರು, ಮದ್ಯ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನ ಮರೆತಿದ್ದರು. ಇದರ ನಡುಚೆ ಸರತಿ ಸಲ್ಲಿನಲ್ಲಿ ನಿಂತು ಖರೀದಿಸುವಂತೆ ಅಂಗಡಿ ಮಾಲೀಕರು ಹೇಳುತ್ತಿದ್ದರು.