ಚಳಿಗೆ ಮಟನ್ ಕಾಲು ಸೂಪ್ ಕುಡಿಬೇಕು ಅನ್ಸುತ್ತಾ…? ಈ ರೆಸಿಪಿ ನೋಡಿ

ಹೊರಗೆ ಮಳೆಯ ಸಿಂಚನ…ಜೊತೆಗೆ ಚಳಿ ಬೇರೆ…ಏನಾದ್ರೂ ಕುಡಿಬೇಕು ಅನ್ಸೋದು ಸಹಜ. ಮತ್ಯಾಕೆ ತಡ ನಾವು ಮಟನ್ ಕಾಲು ಸೂಪ್ ಮಾಡೋದು ಹೇಗೆ ಅಂತ ಹೇಳ್ತಿವಿ.

Mutton Bone Soup, Healthy Mutton Soup - GoSpicy


ಮಟನ್ ಕಾಲು ಸೂಪ್ ಗೆ ಬೇಕಾಗುವ ಪದಾರ್ಥಗಳು
ಮೇಕೆ ಕಾಲು- 4, ಶುಂಠಿ, ಬೆಳ್ಳುಳ್ಳಿ- ಸ್ವಲ್ಪ,ಕರಿಬೇವು- ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಪುದೀನಾ- ಸ್ವಲ್ಪ, ಹಸಿಮೆಣಸಿನಕಾಯಿ- 3-4, ಟೊಮೆಟೋ- 1, ಕಾಳುಮೆಣಸು- ಸ್ವಲ್ಪ, ಜೀರಿಗೆ- ಸ್ವಲ್ಪ, ಎಣ್ಣೆ- ಸ್ವಲ್ಪ, ಸಾಸಿವೆ-ಸ್ವಲ್ಪ, ಅರಿಶಿನದಪುಡಿ-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.

Mutton bone soup/mutton bone Rasam Recipe by Manju Km - Cookpad


ಮಾಡುವ ವಿಧಾನ
ಮೊದಲಿಗೆ ಶುಂಠಿ, ಬೆಳ್ಳುಳ್ಳಿ, ಮೆಣಸು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಕುಕ್ಕರ್ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಸಾಸಿವೆ, ಕರಿಬೇವು ಹಾಕಿ ಬಳಿಕ ಮೇಕೆ ಕಾಲು ಹಾಗೂ ಉಪ್ಪು ಹಾಕಬೇಕು.

Mutton Soup - Recipe Book


ಉಪ್ಪು ಮೇಕೆ ಕಾಲಿಗೆ ಹಿಡಿಯುವಂತೆ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಹುರಿದುಕೊಂಡು ನೀರು ಹಾಕಬೇಕು.
ಜೊತೆಗೆ ಜೀರಿಗೆ, ಕಾಳುಮೆಣಸಿನ ಪುಡಿ, ಅರಿಶಿಣದ ಪುಡಿ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿಕೊಳ್ಳಿ, 10ರಿಂದ 15 ಕೂಗು ಕೂಗಿಸಿಕೊಳ್ಳಬೇಕು. ಪ್ರೆಶರ್ ಸಂಪೂರ್ಣವಾಗಿ ಹೊರ ಬಂದ ಬಳಿಕ ಮುಚ್ಚಳ ತೆಗೆದು ಮತ್ತೆ ಸ್ವಲ್ಪ ಸಮಯ ಬೇಯಿಸಿದರೆ, ರುಚಿಕರವಾದ ಮಟನ್ ಕಾಲಿನ ಸೂಪ್ ಸವಿಯಲು ಸಿದ್ಧ. ಮಟನ್ ಸೂಪ್ ಮಕ್ಕಳಿಗೆ ವೃದ್ಧರಿಗೆ ಆರೋಗ್ಯಕ್ಕೆ ತುಂಬಾ ಒಳ್ಳೇದು. ಮತ್ಯಾಕೆ ತಡ ಇಂದೇ ಈ ರೆಸಿಪಿ ಟ್ರೈ ಮಾಡಿ.

ಇದನ್ನೂ ಓದಿ : – ಬೆಟ್ಟದ ನೆಲ್ಲಿಕಾಯಿಯನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲ ಪ್ರಯೋಜನೆ ಇದೆ ನಿಮಗೆ ತಿಳಿದಿದೆಯೇ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!