ಕಾಂಗ್ರೆಸ್ ನ (CONGRESS ) ಬಸವರಾಜ ಗುರಿಕಾರ (basavaraj gurikar ) ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್ (Salim ahamed ) ತಿಳಿಸಿದ್ದಾರೆ. ಗುರಿಕಾರ ಕಳೆದ 40 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.
ಶಿಕ್ಷಕರು ಬಿಜೆಪಿಯಿಂದ (BJP ) ಭ್ರಮನಿರಸರಾಗಿದ್ದಾರೆ. ಯಾತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು. ಬೆಲೆ ಏರಿಕೆಗೆ, ಭ್ರಷ್ಟಾಚಾರಕ್ಕಾಗಿ ಮತ ಹಾಕಬೇಕಾ ಎಂದು ಸಲೀಂ ಪ್ರಶ್ನಿಸಿದ್ದಾರೆ. ಈಗಾಗಲೇ ನಿರಂತರವಾಗಿ 2 ವರ್ಷಗಳಿಂದ ಶಿಕ್ಷಕರ ಮೇಲೆ ಅನ್ಯಾಯವಾಗುತ್ತಿದೆ. ಇದಕ್ಕೆ ಸರ್ಕಾರ (Government ) ಉತ್ತರ ಕೊಡಬೇಕು. ತಲೆ ತಗ್ಗಿಸುವಂತೆ ಕೆಲಸ ಈ ಸರ್ಕಾರದಿಂದ ನಡೆಯುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದರಿಂದ ಶಿಕ್ಷಕರು (teachers ) ಅರ್ಥ ಮಾಡಿಕೊಳ್ಳುತ್ತಾರೆ. ಸೋಲಿನ ಭಯದಿಂದ ಹೆದರಿ ಹೊರಟ್ಟಿ ( basavaraj horatti )ಬಿಜೆಪಿಗೆ ಸೇರಿದ್ದಾರೆ ಎಂಬ ಸಂದೇಶ ಶಿಕ್ಷಕರಿಗೆ ಹೋಗಿದೆ.
ಏಳು ಬಾರಿ ಸೆಕ್ಯುಲರ್ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದರಿಂದ ಜ್ಯಾತ್ಯಾತೀತ ಮತಗಳು ಅವರಿಗೆ ಹೋಗುತ್ತಿದ್ದವು. ಆದರೆ ಇವತ್ತು ಅಧಿಕಾರದ ಆಸೆಯಿಂದೆ ಚೇರ್ಮೆನ್ ಆಗಬೇಕು ಎಂಬ ಆಸೆಯಿಂದ ಅವರು ಬಿಜೆಪಿ ಸೇರಿದ್ದಾರೆ . ಶಿಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ. ಗುರಿಕಾರ ಮೇಲೆ ಯಾವುದೇ ಕಳಂಕ ಇಲ್ಲ. ಶಿಕ್ಷಕರು ಬದಲಾವಣೆ ಬಯಸುತ್ತಿದ್ದಾರೆ. ಗುರಿಕಾರ ಈ ಬಾರಿ ಗೆಲ್ಲುತ್ತಾರೆ ಎಂದು ಸಲೀಂ ಅಹ್ಮದ್ ತಿಳಿಸಿದ್ರು . ಇದನ್ನೂ ಓದಿ : – ಪಕ್ಷದ ನಿರ್ಣಯಕ್ಕೆ ನಾವೆಲ್ಲರು ತಲೆಬಾಗಲೇಬೇಕು – ಆರಗ ಜ್ಞಾನೇಂದ್ರ