Cinema

ಅಭಿಷೇಕ್-ಅವಿವಾ ಮದುವೆ ಖರ್ಚು ಎಷ್ಟು ಕೋಟಿ ಗೊತ್ತಾ?

ಜ್ಯೂನಿಯರ್ ರೆಬೆಲ್‍ಸ್ಟಾರ್, ಅಭಿಷೇಕ್ ಅಂಬರೀಶ್ ಮದುವೆ ಆಗಿದೆ. ಮುದ್ದು ಗೊಂಬೆ, ಫ್ಯಾಷನ್ ಲೋಕದ ರಂಬೆ ಅವಿವಾ ಬಿದ್ದಪ್ಪ ಅಂಬಿ ಮನೆಗೆ ಸೊಸೆಯಾಗಿ ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಜೂನ್ 5 ರಂದು ಈ ಜೋಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಅಫ್‍ಕೋರ್ಸ್ ಇವರಿಬ್ಬರ ಮದುವೆಯಲ್ಲಿ ಆಡಂಬರಕ್ಕೆ ಕಿಂಚಿತ್ತು ಕಡಿಮೆ ಇರ್ಲಿಲ್ಲಾ..ಅಭಿ-ಅವಿವಾ ರಾಜ ರಾಣಿಯಂತೆ ಕಂಗೊಳುಸುತ್ತಿತ್ತು. ಕಲ್ಯಾಣ ಮಂಟಪದಲ್ಲಿ ಶ್ರೀಮಂತಿಗೆ ಎದ್ದು ಕಾಣ್ತಿತ್ತು.

Abi-Aviva

ಅಂದಹಾಗೆ ಈ ಶ್ರೀಮಂತ ಮದುವೆಯಲ್ಲಿ ಇಲ್ಲಿಯವರೆಗೂ ಬರೋಬ್ಬರಿ 8 ಕೋಟಿ ಅಂತೆ. ಅಲ್ಲದೆ ಸುಮಲತಾ ಎಷ್ಟು ಒಡವೆ ಹಾಕಿದ್ದಾರೆ ಗೊತ್ತ ಅದನ್ನ ಕೇಳಿದ್ರೆ ನಿಮ್ಮಗೆ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರೆ ಸೊಸೆಯ ಮೈ ಮೇಲೆ ಡೈಮಂಡ್ ಹಾಗು ಚಿನ್ನದ ಒಡವೆಯನ್ನೇ ಹಾಕಿಸಿದ್ದಾರೆ. ರೆಬೆಲ್ ಸ್ಟಾರ್ ಮನೆಗೆ ಮಗಳಂತೆ ಬಂದಿರೋ ತನ್ನ ಸೊಸೆ ಅವಿವಾಗಾಗಿ ಸುಮಲತಾ ಬರೋಬ್ಬರಿ 3 ಕೋಟಿಯ ಡೈಮಂಡ್ ಹಾಗು ಚಿನ್ನದ ಒಡವೆಗಳನ್ನ ಕೊಟ್ಟಿದ್ದಾರಂತೆ. ಅವಿವಾ ಮದುವೆಯಲ್ಲಿ ಧರಿಸಿದ್ದ ಒಡವೆಗಳೆಲ್ಲಾ ಸುಮಲತಾ ಅವರ ಗಿಫ್ಟ್ ಅಂತೆ…

ಇತ್ತ ರೆಬೆಲ್ ಸನ್ ಅಭಿಷೇಕ್ ಯಾರಿಗೇನು ಕಮ್ಮಿ ಇಲ್ಲ. ತಮ್ಮ ಮನೆ ಅಳಿಯ ಅಭಿಗೆ ಅದ್ಧೂರಿ ಗಿಫ್ಟ್‍ಗಳನ್ನೆ ಕೊಟ್ಟಿದ್ದಾರೆ. ಅವಿವಾ ಬಿದ್ದಪ್ಪ ಫ್ಯಾಮಿಲಿ. ಅವಿವಾ ತಂದೆ ಪ್ರಸಾದ್ ಬಿದ್ದಪ್ಪ ಅವರು ಅಭಿಗಾಗಿ 1 ಕೋಟಿ 75 ಲಕ್ಷ ಮೌಲ್ಯದ ಬಿಳಿ ಬಣ್ಣದ ಬಿಎಂಡಬ್ಲ್ಯು ಕಾರನ್ನ ಗಿಫ್ಟ್ ಮಾಡಿದ್ದಾರೆ. ಅದರ ಜೊತೆಗೆ ಒಂದು ಕೋಟಿ ಮೌಲ್ಯದ ಒಡವೆ ಕೊಟ್ಟಿದ್ದಾರಂತೆ ಬಿದ್ದಪ್ಪ ಫ್ಯಾಮಿಲಿ…

Abi-Aviva

ಅಭಿ-ಅವಿವಾ ಧರಿಸಿದ್ದ ಬಟ್ಟೆ, ಜ್ಯೂವೆಲರಿ, ಊಟದ ಖರ್ಚು, ಮದುವೆ ಖರ್ಚು ಎಲ್ಲ ಸೇರಿ 8 ಕೋಟಿ ಆಗಿದೆ.. ಅಂತ ಜೆಪಿ ನಗರ ಆಪ್ತ ಮೂಲಗಳು ಹೇಳುತ್ತಿವೆ. ಇನ್ನು ರಿಸೆಪ್ಷನ್, ಸಂಗೀತ್ ಕಾರ್ಯಕ್ರಮ ಮತ್ತು ಬೀಗರ ಔತಣ ಕೂಡ ಭಾಕಿ ಇದೆ. ಆ ಎಲ್ಲದರ ಖರ್ಚು ಸೇರಿದ್ರೆ 13 ರಿಂದ 15 ಕೋಟಿ ಆಗಬಹುದು ಎಂದೇಳಲಾಗ್ತಿದೆ. ಒಟ್ಟಿನಲ್ಲಿ ಅಭಿ ಅವಿವಾರದ್ದು ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ್ದ ಮದುವೆ ಅನ್ನೋದಂತು ನೂರಕ್ಕೆ ನೂರರಷ್ಟು ಸತ್ಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!