ರಘುರಾಮ್ ರಾಜನ್ ಕಾಂಗ್ರೆಸ್ ಪಕ್ಷದ ಮುಂದಿನ ಮನಮೋಹನ್ ಸಿಂಗ್ ?

ಒಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಯಾತ್ರೆ ಬಗ್ಗೆ ಕೆಲವರು ಕುಹಕವಾಡಿದ್ದು ಇದೆ. ಇನ್ನೂ ಕೆಲವರು ಸದ್ದಿಲ್ಲದೆ ರಾಹುಲ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

ಒಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul gandhi ) ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಯಾತ್ರೆ ಬಗ್ಗೆ ಕೆಲವರು ಕುಹಕವಾಡಿದ್ದು ಇದೆ. ಇನ್ನೂ ಕೆಲವರು ಸದ್ದಿಲ್ಲದೆ ರಾಹುಲ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ರಾಹುಲ್ ನೋಡಲು ಕೆಲವೆಡೆ ಜನ ಮುಗಿಬಿದ್ದು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಆಯಾ ರಾಜ್ಯಗಳ ಪ್ರಮುಖ ಚಿಂತಕರು, ನಟರು ರಾಹುಲ್ ಜೊತೆ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ.

ರಾಹುಲ್ ಯಾತ್ರೆಯಿಂದ ಯಾರಿಗೆ ಏನು ಪ್ರಯೋಜನ ಎಂದು ಪ್ರತಿಪಕ್ಷಗಳು ಕೇಳ್ತಿವೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಯಾತ್ರೆ ಮೂಲಕ ರಾಜಕೀಯವಾಗಿ ಹಾಗೂ ಮಾನಸಿಕವಾಗಿ ಬಲಗೊಳ್ಳುತ್ತಿದ್ದಾರೆ. ಅದೇನೇ ಇರಲಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವುದು ರಾಹುಲ್ ಗಾಂಧಿ ಜೊತೆ ಆರ್ ಬಿ ಐ ಮಾಜಿ ಗವರ್ನರ್ , ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ (Raghuram Rajan) ಹೆಜ್ಜೆಹಾಕಿರೋದು.

ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್, ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಕೈಜೋಡಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಮೊಂಡು ವಾಗ್ವಾದಗಳು, ಟೀಕೆಗಳಿಗೆ ಹೆಸರುವಾಸಿಯಾಗಿದ್ದ ರಘುರಾಮ್ ರಾಜನ್ ಇದೀಗ ರಾಹುಲ್ ಯಾತ್ರೆಯಲ್ಲಿ ಭಾಗವಹಿಸಿ ಹಲವರ ಹುಬ್ಬೇರುವಂತೆ ಮಾಡಿದ್ದಾರೆ. ಅದರಲ್ಲೂ ಪ್ರತಿಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆ. ಪ್ರಸ್ತುತ ರಘುರಾಮ್ ರಾಜನ್ ಶಿಕಾಗೋ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಹಣಕಾಸು ಪ್ರಾಧ್ಯಾಪಕರಾಗಿದ್ದಾರೆ.

ಭಾರತದ ಆರ್ಥಿಕ ಸ್ಥಿತಿ ಈಗ ಹೇಳಿಕೊಳ್ಳುವಂತೇನಿಲ್ಲ. ಆರ್ಥಿಕತೆಗೆ ಬೂಸ್ಟರ್ ಡೋಸ್ ಕೊಡುವ ಅವಶ್ಯಕತೆಯಿದೆ. ಇದು ಸಾಧ್ಯವಾಗಿರೋದು ಉತ್ತಮ ಆರ್ಥಿಕ ತಜ್ಞನಿಂದ ಮಾತ್ರ. ಹೀಗಾಗಿ ಕಾಂಗ್ರೆಸ್ ರಘುರಾಮ್ ರಾಜನ್ ಜೊತೆ ಈಗಲೂ ಸಂಪರ್ಕದಲ್ಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಘುರಾಮ್ ರಾಜನ್ ಗೆ ಪ್ರಧಾನಿ ಹುದ್ದೆ ಇಲ್ಲವೇ ವಿತ್ತ ಸಚಿವ ಸ್ಥಾನ ನೀಡೋ ಸಾಧ್ಯತೆ ದಟ್ಟವಾಗಿದೆ.

Raghuram Rajan joins Bharat Jodo Yatra, Oppn stages walkout from both Houses: Top political events in pictures
ರಾಜನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರಿಂದ ಪಕ್ಷ ಹಾಗೂ ಆರ್ಥಿಕತೆ ಎರಡಕ್ಕೂ ಲಾಭವಿದೆ ಎಂಬ ಅಭಿಪ್ರಾಯವಿದೆ. ದೇಶದ ಆರ್ಥಿಕ ನೆಲೆಗಟ್ಟು ಕುಸಿದಿದ್ದು ನಿರುದ್ಯೋಗ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ರಾಜನ್ ಅವರಿಂದ ಮತ್ತಷ್ಟು ಉತ್ತಮ ಕೆಲಸವಾಗಬಹುದು ಎಂಬ ನಂಬಿಕೆ ಇದೆ. ಇದನ್ನು ಓದಿ : – ಡಿಕೆಶಿ ಹೇಳಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಬಿಜೆಪಿ ( bjp )  ವಕ್ತಾರ ಅಮಿತ್ ಮಾಳವೀಯ, ರಾಜನ್ ಕಾಂಗ್ರೆಸ್ ನೇಮಕಗೊಳಿಸಿದ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದು ಮಾಜಿ ಪ್ರಧಾನಿ ಹಾಗೂ ಆರ್ಬಿಐ ಗವರ್ನರ್ ಮನಮೋಹನ್ ಸಿಂಗ್ಗೆ ಹೋಲಿಸಿ ಮುಂದಿನ ಸಿಂಗ್ ರಾಜನ್ ಎಂದು ವ್ಯಂಗ್ಯ ಮಾಡಿದ್ದಾರೆ. ಭಾರತದ ಆರ್ಥಿಕತೆಯ ಕುರಿತು ರಾಜನ್ ಮಾಡಿರುವ ಹೇಳಿಕೆಗಳು ಬರೇ ಅವಕಾಶದ ಸದುಪಯೋಗ ಪಡೆಯಲು ಎಂದು ಟೀಕಿಸಿದ್ದಾರೆ.

Raghuram Rajan joins Bharat Jodo Yatra in Rajasthan | Deccan Herald

ಅದೇನೇ ಇರ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಜನ್ ಭಾಗವಹಿಸುವಿಕೆ ರಾಹುಲ್ ಗಾಂಧಿ ( rahul gandhi ) ರಾಜಕೀಯ ವಿರೋಧಿಗಳ ಗಮನ ಸೆಳೆದಿದೆ. 2024 ರ ಸಂಸತ್ತಿನ ಚುನಾವಣೆಗೆ ಮುಂಚೆಯೇ ಪ್ರತಿಸ್ಪರ್ಧಿಗಳಿಗೆ ರಾಜನ್ ಕಠಿಣ ಸ್ಪರ್ಧೆಯೊಡ್ಡುವ ಅಭ್ಯರ್ಥಿಯಾಗಿ ಕಾಣುತ್ತಿದ್ದಾರೆ.

ಇದನ್ನು ಓದಿ : – ಹೋದಲ್ಲೆಲ್ಲ ಸಿದ್ದರಾಮಯ್ಯ ಅಭ್ಯರ್ಥಿಗಳನ್ನ ಘೋಷಣೆ ಮಾಡುವುದು ಸರಿಯಲ್ಲ – ಸತೀಶ್ ಜಾರಕಿಹೊಳಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!